Apr 23, 2024
Apr 23, 2024
Apr 23, 2024
Apr 23, 2024
Apr 23, 2024
ಕಲ್ಪನೆ — Assumption
ಸಿದ್ದಾಂತವೆಂಬ ಕಟ್ಟಡದ ಕಲ್ಲುಗಳೆಂದರೆ:
೧. ಪರಿಕಲ್ಪನೆ
೨. ಕಲ್ಪನೆ
೩. ಆಧಾರ ಕಲ್ಪನೆ
೪. ಮಾಡಲ್
ಕಲ್ಪನೆ — Assumption
ಅಧ್ಯಯನ ವಿಷಯದ ಬಗ್ಗೆ ಕೆಲವು ಕಲ್ಪನೆಗಳನ್ನು ಆಧಾರವಾಗಿಟ್ಟುಕೊಂಡಾಗ ಮಾತ್ರ ಸಂಶೋಧನೆ ಸಾಧ್ಯ. ಯಾವುದೇ ವಿಧವಾದ ಪೂರ್ವ ಚಿಂತನೆಯಿಲ್ಲದೇ ಸಂಶೋಧನೆ ಆಸಾಧ್ಯ.
ಸಂಶೋಧಕನು ತಾನು ಯಾವ ಕಲ್ಪನೆಗಳು ಅಥವ ಸಂಶೋಧನಾ ಕ್ಷೇತ್ರದ ಬಗ್ಗೆ ಯಾವ ಊಹೆಗಳನ್ನು ಹೊಂದಿರುವೆ ಎಂಬುದನ್ನು ಸ್ಪಷ್ಟವಾಗಿ ಗುರುತಿಸುವ ಪ್ರಯತ್ನ ಮಾಡಬೇಕು. ಆದರೆ, ಒಂದು ಅವಲೋಕಿತ ವಿದ್ಯಮಾನವು ಸಾಮಾನ್ಯ ಜ್ಞಾನವೆಂದು ಪರಿಗಣಿಸಿ, ಪರಿಶೀಲನೆಗೆ ಒಳಪಡಿಸದಿದ್ದರೆ, ಅದು ಸಂಶೋಧನೆಯ ಫಲಿತಾಂಶದ ಮೇಲೆ ಪರಿಣಾಮ ಬೀರಿ, ಸಂಶೋಧಕ ಸೋಲಬಹುದು.
ಅನೇಕ ದಶಕಗಳ ಕಾಲ ಮಹಿಳೆಯರ ಗೃಹ ಸಂಬಂಧಿ ಕೆಲಸ ಆರ್ಥಿಕವಾಗಿ ಯಾವುದೇ ಕೊಡುಗೆ ನೀಡುವುದಿಲ್ಲವೆಂದು ಸಂಶೋಧಕರು ಕಲ್ಪಿಸಿಕೊಂಡಿದ್ದರಿಂದ, ಮಹಿಳೆಯರ ಕೊಡುಗೆಗಳು ನೇಪಥ್ಯಕ್ಕೆ ಸರಿದುಬಿಟ್ಟಿತ್ತು. ಸ್ತ್ರೀವಾದಿಗಳು ಮಹಿಳಾ ಸಂಬಂಧಿ ವಿಷಯಗಳ ಬಗ್ಗೆ ಚರ್ಚಿಸಲು ಪ್ರಾರಂಭಿಸಿದಾಗಲೇ ಮಹಿಳೆ ಒಬ್ಬಳು ಗೃಹಿಣಿಯಾಗಿ ಆರ್ಥಿಕ ಹೊರೆ ಎಂಬ ಕಲ್ಪನೆ ತಪ್ಪು ಎಂದು ಮನವರಿಕೆಯಾಗಿದ್ದು.
ಕೆಲವು ಕಲ್ಪನೆಗಳು ಸಾರ್ವತ್ರಿಕವಾಗಿ ಒಪ್ಪಲ್ಪಟ್ಟಿದ್ದು, ಸರಿ ಎಂದು ಸ್ಥಾಪಿತವಾಗಿರುವುದರಿಂದ, ಅವುಗಳನ್ನು ಆಧಾರವಾಗಿಟ್ಟುಕೊಂದು ಸಂಶೋಧನೆ ಮುಂದುವರಿಸಬಹುದು. ಆದರೂ ಯಾವ ಆಧ್ಯಯನಗಳು/ಫಲಿತಾಂಶಗಳು ನಮ್ಮ ವೈಯಕ್ತಿಕ/ವೃತ್ತಿಪರ ಅಭಿಪ್ರಾಯಗಳಿಗೆ ಪೂರಕವಾಗಿರುತ್ತದೋ, ಅಂತಹ ಕಲ್ಪನೆಗಳನ್ನು ಸುಲಭವಾಗಿ ಒಪ್ಪಿಕೊಳ್ಳುವ, ಅನುಸರಿಸುವ ಸಾಧ್ಯತೆಗಳು ಹೆಚ್ಚು.
ಸಮಾಜಶಾಸ್ತ್ರ ಸಿದ್ಧಾಂತ ರಚಿಸುವಿಕೆಯ ಕೇಂದ್ರದಲ್ಲಿ ಕಲ್ಪನೆಗಳಿರುವವು. ಮಾನವರ ಗುಣ-ಲಕ್ಷಣಗಳೇನು ಎಂಬುದರ ಬಗ್ಗೆ ಕೆಲವು ಮೂಲಭೂತ ಕಲ್ಪನೆಗಳನ್ನಿಟ್ಟುಕೊಂಡು ಸಮಾಜಶಾಸ್ತ್ರ ಸಿದ್ಧಾಂತಕರು ಮುಂದುವರಿಯುವರು.
ಸಮಾಜಶಾಸ್ತ್ರಜ್ಞರು ಮಾನವರ ಸ್ವರೂಪ — ನಿರ್ದಿಷ್ಟವಾಗಿ ಅವರ ವರ್ತನೆಗಳ ಬಗ್ಗೆ ಕೆಲವು ಕಲ್ಪನೆಗಳನ್ನು ಮಾಡಿಕೊಂಡು ಮುಂದುವರಿಯುವರು. ಮಾನವರ ವರ್ತನೆ ಸಾಮಾಜಿಕವಾಗಿ ರೂಪಿಸಲ್ಪಡುತ್ತದೆ ಎಂಬುದರ ಬಗ್ಗೆ ವಿವಾದವಿಲ್ಲ. ಆದರೆ, ಮನುಷ್ಯರ ವರ್ತನೆಯು ಪೂರ್ವನಿರ್ಧಾರಿತ ರೀತಿಯಲ್ಲಿ ಕಂಡು ಬರುವುದೋ ಅಥವಾ ವರ್ತನೆಯಲ್ಲಿ ಸೃಜನಶೀಲತೆಗೆ ಅವಕಾಶವಿದೆಯೋ ಎಂಬುದರ ಬಗ್ಗೆ ಭಿನ್ನಾಭಿಪ್ರಾಯಗಳಿವೆ. ಕಾರ್ಯಾತ್ಮಕವಾದಿಗಳು ಮನುಷ್ಯರ ವರ್ತನೆ ಪೂರ್ವನಿರ್ಧಾರಿತ ಸ್ವರೂಪದ್ದೆಂದು ವಾದಿಸಿದರೆ, ಸಾಂಕೇತಿಕ ಅಂತಃಕ್ರಿಯಾವಾದಿಗಳು ಸೃಜನಶೀಲ ವರ್ತನೆ ಕಂಡುಬರುತ್ತದೆ ಎಂದು ವಾದಿಸುವರು.
ವರ್ತನೆ ಪೂರ್ವನಿರ್ಧಾರಿತ ಸ್ವರೂಪದಲ್ಲಿರುತ್ತದೆ ಎಂದರೇನು?
ಕಾರ್ಯಾತ್ಮಕವಾದಿಗಳ ಪ್ರಕಾರ, ಮಗುವು ತನ್ನ ಪೋಷಕರ, ಸ್ನೇಹಿತರ, ಶಿಕ್ಷಕರ ಹಾಗು ಇತರ ಸಹವಾಸಿಗಳೊಡನೆ ನಡೆಸುವ ಅಂತಃಕ್ರಿಯಗಳ ಮೂಲಕ ತಾನು ಜೀವನದಲ್ಲಿ ಅಳವಡಿಸಕೊಳ್ಳಬೇಕಾದ ವರ್ತನಾ ವಿಧಾನಗಳನ್ನು ಕಲಿತುಕೊಳ್ಳುತ್ತದೆ. ಈ ಕಲಿಯುವಿಕೆಯ ಪ್ರಕ್ರಿಯೆಯನ್ನು ಸಾಮಾಜೀಕರಣ ಎಂಬ ಪರಿಕಲ್ಪನೆಯ ಮೂಲಕ ನಾವು ಗುರುತಿಸುತ್ತೇವೆ.
ಡರ್ಖೀಂ, ಪಾರ್ಸನ್ಸ್, ಮರ್ಟನ್ ಅವರ ಪ್ರಕಾರ, ನಿರ್ದಿಷ್ಟ ಸನ್ನಿವೇಶದಲ್ಲಿನ ಮನುಷ್ಯರ ಸಂಭವನೀಯ ವರ್ತನೆಯನ್ನು ನಾವು ಬಹುಪಾಲು ಸರಿಯಾಗಿ ಊಹಿಸಬಹುದು. ವರ್ತನಾ ವಿಧಾನದಲ್ಲಿ ನಿರ್ಧಾರಕತೆಯಿರುತ್ತದೆ. ಉದಾಹರಣೆಗೆ, ಒಬ್ಬ ವ್ಯಕ್ತಿಯು ಮಹಾತ್ಮ ಗಾಂಧಿಯ ಅನುಯಾಯಿ ಆಗಿದ್ದರೆ, ಆತ ಹಿಂಸಾ ಮಾರ್ಗವನ್ನು ತುಳಿಯುವ ಸಂದರ್ಭಗಳು ನಗಣ್ಯವೆನ್ನಬಹುದು. ಸಾಮಾಜೀಕರಣ ಪ್ರಕ್ರಿಯೆಯ ಮೂಲಕ ಅಂತರಂಗೀಕರಣಗೊಂಡ ಮೌಲ್ಯಗಳು ಮತ್ತು ನಿಯಮಗಳಿಂದಾಗಿ ಜನರ ಭವಿಷ್ಯದ ವರ್ತನೆಗಳನ್ನು ನಾವು ನಿರೀಕ್ಷಿಸಬಹುದು — ಮುಂಗಾಣಬಹುದು.
ಕಾರ್ಯಾತ್ಮಕವಾದಿಗಳ ಪ್ರಕಾರ ವೈಯಕ್ತಿಕ ವರ್ತನೆಯಲ್ಲಿ ಸೃಜನತೆ, ಮುಂಗಾಣಲಾಗದ ಕ್ರಿಯೆಗಳು ಇಲ್ಲವೆಂದಲ್ಲ. ಆದರೆ, ಅಂತಿಮವಾಗಿ, ವರ್ತನೆ ಪೂರ್ವನಿರ್ಧಾರಿತವಾಗಿರುವುದರಿಂದ, ವರ್ತನೆಯಲ್ಲಿ ನಿಯಮಿತತೆ ಇರುವುದರಿಂದ ಅದನ್ನು ನಾವು ಸಮರ್ಪಕವಾಗಿ ವಿವರಿಸಬಹುದೆನ್ನುತ್ತಾರೆ.
ವರ್ತನೆಯಲ್ಲಿ ಸೃಜನಶೀಲತೆ ಎಂದರೇನು?
ಸೂಕ್ಷ್ಮ ಸಮಾಜಶಾಸ್ತ್ರಕ್ಕೆ ಸೇರಿದ ಸಾಂಕೇತಿಕ ಅಂತಃಕ್ರಿಯಾವಾದಿಗಳು ಮಾನವರ ಕ್ರಿಯೆಗೆ ಒತ್ತು ನೀಡುವರು (ಸಾಮಾಜೀಕರಣಕ್ಕಲ್ಲ). ಹಾಗಾಗಿ, ಮಾನವರ ವರ್ತನೆಯ ಬಗೆಗಿನ ಅವರ ಕಲ್ಪನೆ ಕಾರ್ಯಾತ್ಮಕವಾದಿಗಳಿಗಿಂತ ಮೂಲಭೂತವಾಗಿ ವಿಭಿನ್ನವಾಗಿರುವುದು.
ಇವರು ಹೇಳುವಂತೆ, ಮಾನವರು ಯಂತ್ರಗಳಂತೆ ಸಾಮಾಜಿಕ ಕ್ರಿಯೆಗಳಲ್ಲಿ ತೊಡಗುವುದಿಲ್ಲ. ಅವರು ಉದ್ದೇಶ ಪೂರ್ವಕವಾಗಿ ಕ್ರಿಯೆಯಲ್ಲಿ ತೊಡಗುವರು. ಹೀಗೆ ಕ್ರಿಯೆಯಲ್ಲಿ ತೊಡಗಿದಾಗ, ಅವರು ಅನೇಕ ಬಗೆಯ ಸಂಕೇತಗಳನ್ನು ಮತ್ತು ಅರ್ಥಗಳನ್ನು ಬಳಸಿಕೊಳ್ಳುವರು. ಕ್ರಿಯೆಯಲ್ಲಿ ತೊಡಗಿದಾಗ/ತೊಡಗುವಾಗ ಅವರು ತಮ್ಮ ಸಾಮಾಜಿಕ ಸಂದರ್ಭವನ್ನು ವ್ಯಾಖ್ಯಾನಿಸಿ, ತದನಂತರ ಮುಂದುವರೆಯುವರು.
ಮಾನವರು ಸ್ವಯಂಚಾಲಿತ ಯಂತ್ರಗಳಲ್ಲ; ಕೇವಲ ರೂಢಿಗತ ನಿಯಮ ಮತ್ತು ಮೌಲ್ಯಗಳಿಂದ ಪ್ರೇರಿತರಾಗಿ ಕ್ರಿಯೆಯಲ್ಲಿ ತೊಡಗುವುದಿಲ್ಲ. ಅವರದು ಅಪ್ರಯತ್ನಪೂರ್ವಕ/ಪ್ರಯತ್ನವಿಲ್ಲದ ಚಟುವಟಿಕೆಗಳಲ್ಲ.
ಬದಲಿಗೆ, ಮಾನವರು ಕ್ರಿಯೆಯಲ್ಲಿ ತೊಡಗುವಂತಹ ಕರ್ತೃಗಳಾಗಿರುತ್ತಾರೆ. ಅವರು ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸುವುದರಿಂದಲೇ, ಈ ಚಟುವಟಿಕೆಗಳನ್ನು ಸಾಮಾಜಿಕ ಕ್ರಿಯೆಗಳು ಎಂದು ಕರೆಯುವುದು. ಕ್ರಿಯಾಶೀಲತೆಯ ಜೊತೆಗೆ ಕರ್ತೃಗಳು ಸೃಜನಶೀಲರೂ ಆಗಿರುತ್ತಾರೆ. ಕ್ರಿಯೆಗೆ ಪ್ರೇರಣೆಯು ಸಮಾಜದಿಂದ ಬಂದರೂ, ಮಾನವರು ಅದನ್ನು ತಮ್ಮ ಸಂದರ್ಭದಲ್ಲಿ ವ್ಯಾಖ್ಯಾನಿಸಿ ತದನಂತರ ಕ್ರಿಯೆಯಲ್ಲಿ ತೊಡಗುವುದರಿಂದ, ಅವರ ವರ್ತನೆಯನ್ನು ಮುಂಗಾಣಲು ಕಷ್ಟ ಸಾಧ್ಯ.
ಕಾರ್ಯಾತ್ಮಕವಾದಿಗಳಂತೆ, ಸಾಂಕೇತಿಕ ಅಂತಃಕ್ರಿಯಾವಾದಿಗಳೂ ನಿಯಮಿತ ವರ್ತನೆಯ ಪಾತ್ರ ಗುರುತಿಸುವರು. ಆದರೆ, ಅದರ ಪ್ರಕಾರ, ಮನುಷ್ಯರು ಗುಂಪಿನ ಸದಸ್ಯರಾಗಿ ಕ್ರಿಯೆಯಲ್ಲಿ ತೊಡಗುವುದರಕ್ಕಿಂತ ಹೆಚ್ಚಾಗಿ, ತಮ್ಮ ವೈಯಕ್ತಿಕ ನೆಲೆಯಲ್ಲಿ ಕ್ರಿಯಾಶೀಲರಾಗುವರು.
ಸಮಾಜಶಾಸ್ತ್ರೀಯ ಸಿದ್ಧಾಂತಗಳನನ್ನು ಅರ್ಥ ಮಾಡಿಕೊಳ್ಳ ಬೇಕಾದರೆ, ವಿಶ್ಲೇಷಿಸಬೇಕಾದರೆ, ವಿಮರ್ಶಿಸ ಬೇಕಾದರೆ — ಈ ಎರಡು ಮುಖ್ಯ ಕಲ್ಪನೆಗಳಲ್ಲಿ ಯಾವುದನ್ನು ಸಿದ್ಧಾಂತಕಾರರು ಒಪ್ಪಿಕೊಂಡಿರುವರು, ಯಾವುದನ್ನು ಅನುಸರಿಸುತ್ತಿರುವರೆಂದು ಹೇಳಿಕೊಳ್ಳುವರು ಅಥವ ಅವರ ಚಿಂತನೆಯಲ್ಲಿ ಸುಪ್ತವಾಗಿದೆ ಎಂಬುದನ್ನು ಗುರುತಿಸುವುದು ಅವಶ್ಯಕ.
ವೈಜ್ಞಾನಿಕ ಸಿದ್ಧಾಂತವು ಸಾಮಾನ್ಯವಾಗಿ ಈ ಕೆಳಗಿನ ಲಕ್ಞಣಗಳನ್ನು ಹೊಂದಿರುತ್ತವೆ: (ಅ) ಸಿದ್ಧಾಂತದಲ್ಲಿ ಬಳಸುವ ಎಲ್ಲ ಪ್ರಮುಖ ಪದಗಳನ್ನು ಗುರುತಿಸಿ, ಅವುಗಳ...
ಆ ಕಲ್ಲುಗಳೇ- ಘಟಕಗಳು — ಪರಿಕಲ್ಪನೆ, ಕಲ್ಪನೆ, ಊಹಾಕಲ್ಪನೆ ಮತ್ತು ಮಾದರಿಗಳು. ಈ ಕಲ್ಲುಗಳನ್ನು ಗಟ್ಟಿಗೊಳಿಸುವ ಸಿಮೆಂಟೆಂದರೆ, ತರ್ಕ. ಸಿದ್ಧಾಂತವೆಂಬ ಕಟ್ಟಡದ ಅಡಿಪಾಯವು
Comments