Apr 23, 2024
Apr 23, 2024
Apr 23, 2024
Apr 23, 2024
Apr 23, 2024
ಮಾಡಲ್ — Model
ಸಿದ್ದಾಂತವೆಂಬ ಕಟ್ಟಡದ ಕಲ್ಲುಗಳೆಂದರೆ:
೧. ಪರಿಕಲ್ಪನೆ
೨. ಕಲ್ಪನೆ
೩. ಆಧಾರ ಕಲ್ಪನೆ
೪. ಮಾಡಲ್
ಮಾಡಲ್ ಎಂದರೆ ಮಾದರಿ, ನಮೂನೆ. ಆದರೆ, ಈ ಪದಗಳನ್ನು ಬೇರೆ ಪರಿಕಲ್ಪನೆಗಳನ್ನು ಸೂಚಿಸಲು ಈಗಾಗಲೇ ಸಮಾಜಶಾಸ್ತ್ರದಲ್ಲಿ ಬಳಸಿರುವುದರಿಂದ, ಮಾಡಲ್ ಎಂಬ ಪದವನ್ನೇ ಬಳಸಲಾಗಿದೆ. (ಮಾದರಿಯನ್ನು sample ಪದಕ್ಕೆ ಹಾಗು ನಮೂನೆಯನ್ನು form ಪದಕ್ಕೆ ಬಳಸಲಾಗುವುದು).
ಸಾಮಾಜಿಕ ವಿದ್ಯಮಾನಗಳನ್ನು ಅರ್ಥ ಮಾಡಿಕೊಳ್ಳಲು ಮತ್ತು ವಿವರಿಸಲು, ಸೈದ್ಧಾಂತಿಕ ಚೌಕಟ್ಟಿನಲ್ಲಿ ಸಮಾಜಶಾಸ್ತ್ರೀಯ ಮಾಡಲ್ ಗಳನ್ನು ರಚಿಸಲಾಗುವುದು. ಇವು ಸಾಮಾಜಿಕ ಪ್ರಪಂಚದ ಸಂಕೀರ್ಣತೆಯನ್ನು ಸರಳಗೊಳಿಸುತ್ತವೆ ಮತ್ತು ಸಾಮಾಜಿಕ ಸಂಬಂಧಗಲನ್ನು ಉತ್ತಮವಾಗಿ ಅರ್ಥೈಸಿಕೊಳ್ಳಲು ಸಾಧ್ಯವಾಗುವುದು.
ಭೌತಶಾಸ್ತ್ರದಂತಹ ವಿಜ್ಞಾನದಲ್ಲಿ ಗಣಿತೀಯ ಮಾಡಲ್ ಗಳು ಸರ್ವೇ ಸಾಮಾನ್ಯ. ಸಮಾಜಶಾಸ್ತ್ರೀಯ ಮಾಡಲ್ಗಳು ವಿವರಣಾತ್ಮಕ ಸ್ವರೂಪವನ್ನು ಹೊಂದಿರುತ್ತವೆ. ಆದ್ದರಿಂದ, ಮಾಡಲ್ ಮತ್ತು ಸಿದ್ಧಾಂತ ಎಂಬ ಪದಗಳನ್ನು ಅನೇಕ ಭಾರಿ ಪರ್ಯಾಯ ವಾಚಕಗಳಾಗಿ ಬಳಸಲಾಗುವುದು. ಆದರೆ, ಇದು ಸೂಕ್ತವಲ್ಲ. ಸಮಾಜಶಾಸ್ತ್ರೀಯ ಸಿದ್ಧಾಂತಗಳು ಗಣಿತೀಯ ಸ್ವರೂಪದಲ್ಲಿ ಇಲ್ಲದಿದ್ದರೂ, ಕಂಪ್ಯೂಟರ್ ಮಾಡಲ್ ಗಳನ್ನು ರಚಿಸುವುದು ಕಂಡುಬರುತ್ತಿದೆ. ಸಾಮಾಜಿಕ ಸಂಘಟನೆ, ಸಾಮಾಜಿಕ ನೆಟ್ ವರ್ಕ್ ಮುಂತಾದವು ಗುಂಪಿನ ಸದಸ್ಯರ ಕಾರ್ಯ ನಿರ್ವಹಣೆ, ಉತ್ಪಾದಕತೆಗಳನ್ನು ಹೇಗೆ ಪ್ರಭಾವಿಸುತ್ತದೆ ಎಂಬುದನ್ನು ತಿಳಿಯಲು ಕಂಪ್ಯೂಟರ್ ಜನರೇಟಡ್ ಮಾಡಲ್ ಗಳು ಬಹು ಉಪಯುಕ್ತಕಾರಿ. ಕಂಪ್ಯೂಟರ್ ಮಾಡಲ್ ರೀತಿಯಲ್ಲಿ, ಕಾರ್ಯ-ಕಾರಣ ಸಂಬಂಧ ಸೂಚಿಸುವ ಸಂಖ್ಯಾಶಾಸ್ತ್ರೀಯ ಮಾಡಲ್ಗಳನ್ನೂ ನಾವು ಕಾಣಬಹುದು. ಆದ್ದರಿಂದ, ಸಿದ್ಧಾಂತ ಮತ್ತು ಮಾಡಲ್ ಎಂಬ ಪದಗಳನ್ನು ಪ್ರತ್ಯೇಕ ಪರಿಕಲ್ಪನೆಗಳೆಂದು ಪರಿಗಣಿಸುವುದೇ ಸೂಕ್ತ.
ಸಮಾಜಶಾಸ್ತ್ರದಲ್ಲಿ ಅನೇಕ ಬಗೆಯ ಮಾಡಲ್ ಗಳ ಮೂಲಕ ಸಿದ್ಧಾಂತವನ್ನು ಸುಲಭವಾಗಿ ಅರ್ಥಮಾಡಿಕೊಳ್ಳಲು ಬಳಸಲಾಗುತ್ತದೆ. ಮ್ಯಾಕ್ಸ ವೆಬರ್ ಅವರ ಐಡಿಯಲ್-ಟೈಪ್ ಸುಪ್ರಸಿದ್ಧವಾಗಿದೆ. ವೆಬರ್ ಅವರು ಸಂಕೀರ್ಣ ಸೈದ್ಧಾಂತಿಕ ಚಟುವಟಿಕೆಗಳನ್ನು ಸರಳಗೊಳಿಸಲು ಐಡಿಯಲ್ ಟೈಪ್ ಮಾಡಲ್ ಗಳ ಬಳಕೆ ಅವಶ್ಯಕವೆನ್ನುತ್ತಾರೆ.
ಇದಲ್ಲದೇ, ಸಮಾಜಶಾಸ್ತ್ರದಲ್ಲಿ ರೂಪಕಾತ್ಮವಾಗಿರುವ ಮಾಡಲ್ ಗಳ ಬಳಕೆಯನ್ನೂ ನಾವು ಕಾಣುತ್ತೇವೆ. ರೂಪಕಗಳು ಅಕ್ಷರಶಃ ಹೋಲಿಕೆ ಒಳಪಡಿಸಲಾಗದ ವಿಭಿನ್ನ ವಸ್ತುಗಳ ನಡುವಿನ ಸಾಮ್ಯತೆಗೆ ಗಮನ ಹರಿಸುತ್ತದೆ.
ಹರ್ಬರ್ಟ್ ಸ್ಪೆನ್ಸರ್ ಅವರ ಜೈವಿಕ ಸಾದೃಶ್ಯತೆ, ರೂಪಕಕ್ಕೆ ಒಂದು ಉದಾಹರಣೆ. ಸ್ಪೆನ್ಸರ್ ಅವರು, ಜೀವಿ ಮತ್ತು ಸಮಾಜಗಳ ನಡುವಿನ ಸಾಮ್ಯತೆ ಮತ್ತು ಭಿನ್ನತೆಗಳನ್ನು ಗುರುತಿಸುವ ಮೂಲಕ, ಸಾಮಾಜಿಕ ವಾಸ್ತವತೆಯ ಹುಟ್ಟು, ವಿಕಾಸ ಮತ್ತು ಪ್ರಸ್ತುತ ಸ್ಥಿತಿಯನ್ನು ವಿವರಿಸುವ ಪ್ರಯತ್ನ ಮಾಡಿರುವರು.
ಕೆಲವು ಚಿಂತಕರ ಪ್ರಕಾರ, structural-functionalism (ರಾಚನಿಕ-ಕಾರ್ಯಾತ್ಮಕವಾದ)ನ್ನು ಮಾಡಲ್ ಎಂದು ಪರಿಗಣಿಸಬಹುದು. ಏಕೆಂದರೆ, ಈ ಮಾಡಲ್, ಪರಸ್ಪರ ತದ್ವಿರುದ್ಧವಾದ ಕಾರ್ಯಾತ್ಮಕವಾದ (ಸಮತೋಲನ, ವ್ಯವಸ್ಥೆ ಬಗ್ಗೆ ಮಾತನಾಡುವ ಡರ್ಖೀಂ, ಪಾರ್ಸನ್ಸ್ ಮುಂತಾದವರ ಚಿಂತನೆ) ಹಾಗು ಮಾರ್ಕ್ಸವಾದ (ಸಂಘರ್ಷ, ಅಸಮತೋಲನ, ಶೋಷಣೆ) — ಇವೆರಡನ್ನೂ ಈ ಮಾಡಲ್ ನ ಅಡಿಯಲ್ಲಿ ಕೂಡಿಸಬಹುದು. ಆದರೆ, ಬಹುಪಾಲು ಸಮಾಜಶಾಸ್ತ್ರಜ್ಞರು, ಸ್ಟ್ರಕ್ಚರಲ್-ಫಂಕ್ಷನಲಿಸಂನ್ನು ಸಿದ್ದಾಂತವೆಂದೇ ಪರಿಗಣಿಸುವರು.
ಆ ಕಲ್ಲುಗಳೇ- ಘಟಕಗಳು — ಪರಿಕಲ್ಪನೆ, ಕಲ್ಪನೆ, ಊಹಾಕಲ್ಪನೆ ಮತ್ತು ಮಾದರಿಗಳು. ಈ ಕಲ್ಲುಗಳನ್ನು ಗಟ್ಟಿಗೊಳಿಸುವ ಸಿಮೆಂಟೆಂದರೆ, ತರ್ಕ. ಸಿದ್ಧಾಂತವೆಂಬ ಕಟ್ಟಡದ ಅಡಿಪಾಯವು
ಕೆಲವು ಕಲ್ಪನೆಗಳು ಸಾರ್ವತ್ರಿಕವಾಗಿ ಒಪ್ಪಲ್ಪಟ್ಟಿದ್ದು, ಸರಿ ಎಂದು ಸ್ಥಾಪಿತವಾಗಿರುವುದರಿಂದ, ಅವುಗಳನ್ನು ಆಧಾರವಾಗಿಟ್ಟುಕೊಂದು ಸಂಶೋಧನೆ ಮುಂದುವರಿಸಬಹುದು. ಆದರೂ ಯಾವ
ವಿಚಾರ ಮಾಡುವುದಕ್ಕೆ ಆಧಾರವಾಗಿ ಇಟ್ಟುಕೊಂಡಿರುವ ಕಲ್ಪನೆಯೇ ಆಧಾರ ಕಲ್ಪನೆ ಅಥವಾ ಪ್ರಾಕ್ ಕಲ್ಪನೆ. ಆಂಗ್ಲ ಭಾಷೆಯಲ್ಲಿ ಆಧಾರ ಕಲ್ಪನೆಯನ್ನು ಹೈಪಾತಿಸಿಸ್ (hypothesis)
Comments