top of page

Induction — Deduction


ಅನುಗಮನ-ನಿಗಮನ


ಅನುಗಮನ — Induction

ನಿಗಮನ — Deduction


ಅನುಗಮನ: ಕೆಲವು ನಿರ್ದಿಷ್ಟ ಉದಾಹರಣೆಗಳಿಂದ ಸಾಮಾನ್ಯಸೂತ್ರ ಕಲ್ಪಿಸುವುದು

ಸಿದ್ಧಾಂತವನ್ನು ಕಟ್ಟುವುದು, ಸಿದ್ಧಾಂತವನ್ನು ಬೆಳಸುವುದು

ನಿಗಮನ: ಕಾರಣ ಪೂರ್ವಕ ಊಹನ

ಸಾಮಾನ್ಯದಿಂದ ನಿರ್ದಿಷ್ಟಕ್ಕೆ ಅನುಮಾನಿಸುವುದು/ ಊಹಿಸುವುದು; ರಚಸಿಲ್ಪಟ್ಟಿರುವ ಸಿದ್ಧಾಂತವನ್ನು ಪರಿಶೀಲಿಸಲು

ಸಾಮಾಜಿಕ ಸಂಶೋಧನೆಯಲ್ಲಿ, ಸಿದ್ಧಾಂತದ ರಚಿಸುವಿಕೆಯಲ್ಲಿ ಈ ಎರಡೂ ಸಂಶೋಧನಾ ವಿಧಾನಗಳನ್ನು ಸಾಮಾನ್ಯವಾಗಿ ಬಳಸಲಾಗುವುದು. ಇವೆರೆಡನ್ನು ಪ್ರತ್ಯೇಕವಾಗಯೇ ಬಳಸಬೇಕೆಂದಿಲ್ಲ. ಎರಡನ್ನೂ ಬಳಸಬಹುದು ಅಥವಾ ಅವುಗಳ ಸಂಮಿಶ್ರಣದ ಬಳಕೆಯನ್ನು ಕಾಣಬಹುದು. ಉದ್ದೇಶ ಸಾಧನೆಗೆ ಒಂದೇ ಮಾರ್ಗವಿದೆಯೆಂದು ಹೇಳಲಾಗುವುದಿಲ್ಲ.


ಅನುಗಮನ ತಾರ್ಕಿಕ ವಿಧಾನ


ನಿರ್ದಿಷ್ಟ ಅವಲೋಕನ — → ಮಾದರಿ ಗುರುತಿಸುವಿಕೆ — -> ಸಾಮಾನ್ಯ ನಿರ್ಣಯ/ಸೂತ್ರ

ಸಂಶೋಧನಾ ವಿಷಯ/ಕ್ಷೇತ್ರದ ಬಗ್ಗೆ ಯಾವುದೇ ಅಧ್ಯಯನಗಳು ನಡೆದಿಲ್ಲದಿರುವಾಗ ಅಥವಾ ಬಹಳ ಕಡಿಮೆ ಅಧ್ಯಯನಗಳು ನಡೆದಿದ್ದಾಗ, ಸಮರ್ಪಕವಾದ ಸಿದ್ಧಾಂತಗಳು ಲಭ್ಯವಿರುವುದಿಲ್ಲ. ಆ ಸಂದರ್ಭದಲ್ಲಿ ಅನುಗಮನ ತಾರ್ಕಿಕ ವಿಧಾನ ಉಪಯುಕ್ತಕಾರಿ.

ಈ ವಿಧಾನವನ್ನು ಬಳಸುವ ವಿಜ್ಞಾನಿಗಳು, ಸಿದ್ಧಾಂತಗಳನ್ನು ಅವಲಂಬಿಸಿ ಸಂಶೋಧನೆ ಮಾಡುವುದಿಲ್ಲ. ತಾವೇ ಅವಲೋಕಿಸಲು ಪ್ರಾರಂಭಿಸಿ ಮಾಹಿತಿಯನ್ನು ಬಹಳವಾಗಿ ಸಂಗ್ರಹಿಸುವರು. ಸ್ಪಷ್ಟವಾಗಿ ನಿರೂಪಿಸಲ್ಪಟ್ಟ ಪ್ರಾಕ್ಕಲ್ಪನೆ ಸಂಶೋಧನೆಗೆ ಅಡ್ಡಿಯೆಂದು ಅವರು ನಂಬುತ್ತಾರೆ. ಈ ನಿಷ್ಠುರತೆಯಿಂದಾಗಿ ಅನೇಕ ವಾಸ್ತವಾಂಶಗಳ ಬಗ್ಗೆ ಸಂಶೋಧಕ ಗಮನ ಹರಿಸದೇ ಇರಬಹುದು. ಬದಲಿಗೆ, ಅಧ್ಯಯನ ವಿಷಯದ ಬಗೆಗಿನ ಜ್ಞಾನ ಹಂತಹಂತವಾಗಿ ಬೆಳೆಯುವುದು ಮತ್ತು ಅಧ್ಯಯನ ಕ್ಷೇತ್ರದಲ್ಲಿ ನಡೆಯುತ್ತಿರುವ ಸಾಮಾಜಿಕ ಕ್ರಿಯೆಗಳ ವರ್ಣನೆ ಮತ್ತು ವಿವರಣೆ ಸಾಧ್ಯವಾಗುತ್ತದೆ.

ಈ ವಿಧಾನದಲ್ಲಿ, ಪ್ರಮುಖ ಪರಿಕಲ್ಪನೆಗಳು ಸಂಶೋಧನೆಯ ಕೊನೆಯ ಹಂತದಲ್ಲಿ ರೂಪುಗೊಳ್ಳುತ್ತದೆ. ಪರಿಕಲ್ಪನೆಗಳ ಮೂಲಕ ಸಾಮಾಜಿಕ ಕ್ರಿಯೆಗಳನ್ನು ಅರ್ಥಮಾಡಿಕೊಳ್ಳುವುದಿಲ್ಲ. ಉದಾಹರಣೆಗೆ, ಎರ್ವಿಂಗ್ ಗಾ‌ಫ್ಮನ್ ಅವರು ಮಾನಸಿಕ ಅಸ್ವಸ್ಥರ ಬಗೆಗಿನ ಅಧ್ಯಯನದಲ್ಲಿ, ಸುದೀರ್ಘವಾದ ಅವಲೋಕನ, ಸಂದರ್ಶನಗಳನ್ನು ನಡೆಸಿ, ಸಂಶೋಧನಾ ಪ್ರಕ್ರಿಯೆಯ ಕಟ್ಟಕಡೆಯ ಹಂತದಲ್ಲಿ ಮಾನಸಿಕ ಆಸ್ಪತ್ರೆಗಳನ್ನು/ರಿಹೆಬಿಲಿಟೇಶನ್ ಸೆಂಟರ್ ಗಳನ್ನ total institutions ಎಂದು ಗುರುತಿಸಿದರ. ವ್ಯಕ್ತಿಯನ್ನು ಸಂಪೂರ್ಣವಾಗಿ ನಿಯಂತ್ರಣದಲ್ಲಿಟ್ಟುಕೊಳ್ಳುವ ಸಂಸ್ಥೆಗಳೆನ್ನುತ್ತಾರೆ. ಈಗ ಸಮಾಜಶಾಸ್ತ್ರದಲ್ಲಿ total institution ಒಂದು ಪ್ರಮುಖ ಪರಿಕಲ್ಪನೆಯಾಗಿದೆ.

ಅನುಗಮನ ತಾರ್ಕಿಕ ವಿಧಾನದಲ್ಲಿ ಗುಣಾತ್ಮಕ ಸಂಶೋಧನೆಗಳಿಗೆ ಒತ್ತು ನೀಡುವರು. ಸಾಂಕೇತಿಕ ಅಂತಃಕ್ರಿಯಾವಾದಿಗಳು, ಫೆನಾಮೆನಾಲಜಿಸ್ಟರು ಈ ವಿಧಾನ ಬಳಸುವರು.


ನಿಗಮನ ತಾರ್ಕಿಕ ವಿಧಾನ


ಇರುವ ಸಿದ್ಧಾಂತ →ಪ್ರಾಕ್ಕಲ್ಪನೆ →ಮಾಹಿತಿ ಸಂಗ್ರಹಣೆ →ಮಾಹಿತಿ ವಿಶ್ಲೇಷಣೆ →ಪ್ರಾಕ್ಕಲ್ಪನೆ ಸರಿ/ತಪ್ಪು ಎಂಬ ತೀರ್ಮಾನ

ನಿಗಮನ ವಿಧಾನವು ಮೇಲಿನ ಅನುಗಮನಕ್ಕೆ ವಿರುದ್ಧವಾದ ತಾರ್ಕಿಕ ಚಿಂತನೆಯಿಂದ ಪ್ರೇರಿತವಾಗಿದೆ. ಸಮಾಜಶಾಸ್ತ್ರದಲ್ಲಿ ಕಾರ್ಯಾತ್ಮಕವಾದ, ಸಂಘರ್ಷವಾದ, ರಾಶನಲ್ ಚಾಯ್ಸ್ ಸಿದ್ಧಾಂತಗಳು ಈ ತಾರ್ಕಿಕ ವಿಧಾನಕ್ಕೆ ಉತ್ತಮ ಉದಾಹರಣೆಗಳು.

ಈಗಾಗಲೇ ಲಭ್ಯವಿರುವ ಸಾಮಾನ್ಯ ಪ್ರಸ್ಥಾವನೆಗಳನ್ನು ಆಧರಿಸಿ, ಇವರು ತಮ್ಮ ವಾದಗಳನ್ನು, ಪ್ರಾಕ್ಕಲ್ಪನೆಗಳನ್ನು ನಿಗಮನ ಮಾಡುವರು — ಪಡೆಯುವರು.

ಉದಾಹರಣೆಗೆ:

೧. ರಾಬರ್ಟ್ ಮರ್ಟನ್ ಅವರು ಕಾರ್ಯಾತ್ಮಕವಾದದ ಪ್ರಮುಖ ಚಿಂತಕರು. ಸಮಾಜದಲ್ಲಿರುವ ಮೌಲ್ಯಗಳು ಮತ್ತು ಲಭ್ಯವಿರುವ ಅವಕಾಶಗಳ ನಡುವೆ ಅಸಾಮಂಜಸ್ಯತೆ ಉಂಟಾದಾಗ, ಅಂತಹ ಗುಂಪಿನಲ್ಲಿ ಅಪವರ್ತನೆ ಉಂಟಾಗುತ್ತದೆ ಎಂಬ ತೀರ್ಮಾನಕ್ಕೆ ಬರುವರು.

೨. ರಾಲ್ಫ್ ಡಾಹ್ರನಡಾರ್ಫ್ ಅವರು ಸಂಘರ್ಷ ಸಿದ್ಧಾಂತವನ್ನು ಅನುಸರಿಸುತ್ತಾರೆ. ಅವರು ಸಂಘಟನೆಯಲ್ಲಿನ ಸಂಘರ್ಷದ ಮೂಲಕ ಔದ್ಯೋಗಿಕ ಸಂಘರ್ಷವನ್ನು ವಿವರಿಸುವರು.

 
 
 

Recent Posts

See All
Why Theory?

೧. ತಿಳಿಯುವುದಕ್ಕೋಸ್ಕರ ತಿಳಿಯಲು ೨. ಯಾವುದಾದರು ಸಮಸ್ಯೆಗೆ ಉತ್ತರವನ್ನು ಕಂಡುಕೊಳ್ಳಲು.

 
 
 
Fact — ಸತ್ಯ ಸಂಗತಿ

ಸತ್ಯ ಸಂಗತಿಯು ವಾಸ್ತವತೆಯನ್ನು ಸೂಚಿಸುತ್ತದೆ. ನೈಸರ್ಗಿಕ ಅಥವಾ ಸಾಮಾಜಿಕ ವಿದ್ಯಮಾನದ ನಿರ್ವಿವಾದ ಅವಲೋಕನವನ್ನು ವಾಸ್ತವ ಎನ್ನುತ್ತೇವೆ. ಇದನ್ನು ವಾಸ್ತವಾಂಶ ಎಂದೂ ಕರೆಯ

 
 
 

Comments


©2022 by LearningSociology. Proudly created with Wix.com

bottom of page