Apr 23, 2024
Apr 23, 2024
Apr 23, 2024
Apr 23, 2024
Apr 23, 2024
ವೈಜ್ಞಾನಿಕ ಸಿದ್ಧಾಂತಗಳು ಮೂರು ವಿಧಗಳಾಗಿ ನೋಡಬಹುದು:
(ಅ) ಸಮಗ್ರ ಸಿದ್ಧಾಂತಗಳು (Macro theories)
(ಆ) ಸೂಕ್ಷ್ಮ ಸಿದ್ಧಾಂತಗಳು (Micro theories)
(ಇ) ಮಧ್ಯಂತರ ಮಟ್ಟದ ಸಿದ್ಧಾಂತಗಳು (Meso theories)
(ಅ) ಸಮಗ್ರ ಸಿದ್ಧಾಂತಗಳು
ಇವು ಸಮಾಜದ ಬಗೆಗಿನ ಬೃಹತ್ ಪ್ರಮಾಣದ ಸಿದ್ಧಾಂತಗಳು. ಇವುಗಳನ್ನು grand narratives — ಬೃಹತ್ ಕಥಾನಕಗಳು ಎಂದು ಆಧುನಿಕೋತ್ತರ ಚಿಂತಕರು ಕರೆಯುವರು. ಸಮಾಜಶಾಸ್ತ್ರದಲ್ಲಿ ಕಾರ್ಯಾತ್ಮಕವಾದ, ಮಾರ್ಕ್ಸವಾದ ಈ ಬಗೆಯ ಸಿದ್ಧಾಂತಕ್ಕೆ ಉದಾಹರಣೆಗಳು.
ಒಂದು ಗುಂಪಿನ ಒಟ್ಟು ಸಾಮಾಜಿಕ ರಚನೆ, ವ್ಯವಸ್ಥೆ ಮತ್ತು ಜನಸಮೂಹದಲ್ಲಿ ಕಾಣಬರುವ ಬೃಹತ್ ಪ್ರಮಾಣದ ಮಾದರಿಗಳನ್ನು ಮತ್ತು ಒಲವುಗಳನ್ನು ಪರಿಶೀಲಿಸುವ ವಿಧಾನಗಳನ್ನು ಸಮಗ್ರ ಸಮಾಜಶಾಸ್ತ್ರೀಯ (macro sociological) ಸಿದ್ಧಾಂತಗಳೆಂದು ಕರಯುತ್ತೇವೆ.
ಸಮಗ್ರ ಸಮಾಜಶಾಸ್ತ್ರಜ್ಞರು ಕೇಳುವ ಪ್ರಶ್ನೆಗಳೆಂದರೆ -
(ಅ) ಯಾವ ಬಗೆಯಲ್ಲಿ ಜಾತಿ ವ್ಯವಸ್ಥೆಯು ಭಾರತೀಯ ಸಮಾಜದ ಗುಣ, ರಚನೆ ಮತ್ತು ಅಭಿವೃದ್ಧಿಯನ್ನು ರೂಪಿಸಿದೆ?
(ಆ) ಆಧುನಿಕ ಸಮಾಜದ ಜನರೇಕೆ ಕೊಳ್ಳುಬಾಕತನವನ್ನು ಬೆಳೆಸಿಕೊಂಡಿರುವರು? ಆದಾಯವಿಲ್ಲದಿದ್ದರೂ ಮಾರುಕಟ್ಟೆಯಲ್ಲಿ ಲಭ್ಯವಿರುವ ವಸ್ತುಗಳನ್ನು ಕೊಂಡುಕೊಳ್ಳಬೇಕೆಂಬ ಬಯಕೆಗೆ ಬೀಳುವರು?
ಸಮಗ್ರ ಸಮಾಜಶಾಸ್ರ್ರಜ್ಷರು ಸಂಪೂರ್ಣ ಮಾನವ ಸಮಾಜಕ್ಕೆ ಅಥವಾ ಒಂದು ಇಡೀ ದೇಶಕ್ಕೆ ಅನ್ವಯವಾಗುವಂತಹ ಸಿದ್ಧಾಂತಗಳ ರಚಿಸುವಿಕೆ ಕಡೆ ಗಮನ ಹರಿಸುತ್ತಾರೆ. ಉದಾಹರಣೆಗೆ, ಕಾರ್ಲ ಮಾರ್ಕ್ಸ್ ಅವರು ತಮ್ಮ ವರ್ಗ ಸಂಘರ್ಷ ಸಿದ್ಧಾಂತವು ಜಗತ್ತಿನ ಯಾವುದೇ ಮಾನವ ಸಮಾಜದ ಅಧ್ಯಯನದಲ್ಲಿ ಸಹಕಾರಿ ಎಂದು ವಾದಿಸುತ್ತಾರೆ. ಹಾಗೆಯೇ, ಟಾಲ್ಕಾಟ್ ಪಾರ್ಸನ್ಸ್ ಅವರು ತಮ್ಮ ಸಾಮಾಜಿಕ ವ್ಯವಸ್ಥೆ ಮತ್ತು ಸಾಮಾಜಿಕ ಕ್ರಿಯೆಗಳ ಬಗೆಗಿನ ಚಿಂತನೆ ಎಲ್ಲ ಸಮಾಜಗಳನ್ನು ಅರ್ಥ ಮಾಡಿಕೊಳ್ಳಲು ಬಳಸಬಹುದೆಂದು ಪ್ರತಿಪಾದಿಸಿದ್ದಾರೆ.
ಸಮಗ್ರ ಸಮಾಜಶಾಸ್ತ್ರಜ್ಞರ ಪ್ರಕಾರ, ಎಲ್ಲ ಸಾಮಾಜಿಕ ಗುಂಪುಗಳಲ್ಲೂ ಸಾಮಾನ್ಯ ಅಂಶಗಳಿದ್ದು, ಅಲ್ಲಿನ ಸಾಮಾಜಿಕ ರಚನೆಗಳು ಮೇಲ್ನೋಟಕ್ಕೆ ವಿಭಿನ್ನವೆಂದು ಕಂಡುಬಂದರೂ ಅವುಗಳನ್ನು ವಿಶ್ಲೇಷಿಸಲು ಕೆಲವೇ ಕೆಲವು ಸೂತ್ರಗಳು ಸಾಕು.
ಸೂಕ್ಷ್ಮ ಸಿದ್ಧಾಂತಗಳು
ಸೂಕ್ಷ್ಮ ಸಮಾಜಶಾಸ್ತ್ರೀಯ ಸಿದ್ಧಾಂತವು ವ್ಯಕ್ತಿಗಳು ಮತ್ತು ಸಣ್ಣ ಗುಂಪುಗಳಲ್ಲಿನ ಅಂತಃಕ್ರಿಯೆಗಳ ಬಗ್ಗೆ ಗಮನ ಹರಿಸುತ್ತದೆ.
ಇದು ಸಣ್ಣ ಗುಂಪುಗಳಲ್ಲಿನ ಅಂತಃಕ್ರಿಯೆಯ ಮಾದರಿಗಳು ಮತ್ತು ಒಲವುಗಳನ್ನು ಅಧ್ಯಯನ ಮಾಡುತ್ತದೆ. ಸಮುದಾಯದ ಮಟ್ಟದಲ್ಲಿ ಹಾಗು ಜನರ ದೈನಂದಿನ ಜೀವನದ ಚಟುವಟಿಕೆಗಳು ಮತ್ತು ಸಂದರ್ಭಗಳ ಬಗೆಗಿನ ವಿವರಣೆಗಳು ಸೂಕ್ಷ್ಮ ಸಿದ್ಧಾಂತಗಳು.
ಸೂಕ್ಷ್ಮ ಸಿದ್ಧಾಂತಕಾರು ಕೇಳುವ ಪ್ರಶ್ನೆಗಳು, ಅವಲೋಕಿಸುವ ಗುಂಪುಗಳೆಂದರೆ -
(ಅ) ನಿರ್ದಿಷ್ಟ ಗ್ರಾಮೀಣ ಪ್ರದೇಶದ ಕುಟುಂಬಗಳಲ್ಲಿ ಕಾಣಬರುವ ಅಂತಃಕ್ರಿಯೆಯ ಸ್ವರೂಪಗಳು
(ಆ) ಬೆಂಗಳೂರು ನಗರದ ಉಪನಗರವಾದ ಕೆಂಗೇರಿಯಲ್ಲಿನ ಸಾಮಾಜಿಕ ಸಂಬಂಧಗಳ ಸ್ವರೂಪ
ಇವರು, ಸಾಮಾಜಿಕ ರಚನೆಯ ಬದಲು ಸಾಮಾಜಿಕ ನೆಟ್ ವರ್ಕ್, ಅಂತಃಕ್ರಿಯೆ ವಿವಿಧ ಸ್ವರೂಪಗಳು, ಅಂತಃಕ್ರಿಯೆಯ ತೀವ್ರತೆ, ವ್ಯಕ್ತಿಗಳು ಯಾವ ಬಗೆಯಲ್ಲಿ ಸಾಮಾಜಿಕ ಸಂದರ್ಭಕ್ಕೆ ತಕ್ಕಂತೆ ನಿರ್ಣಯಗಳನ್ನು ತೆಗೆದುಕೊಳ್ಳುವರು, ಸಾಮಾಜಿಕ ಮೌಲ್ಯಗಳನ್ನು ವ್ಯಾಖ್ಯಾನಿಸಿ, ವಿಶ್ಲೇಷಿಸುವರು ಇತ್ಯಾದಿ ಅಂಶಗಳ ಬಗ್ಗೆ ಗಮನ ಹರಿಸುವರು
ಮಧ್ಯಮ ಹಂತದ ಸಿದ್ಧಾಂತಗಳು
ಈ ಸಿದ್ಧಾಂತಗಳು ಸಮಗ್ರ ಸಿದ್ಧಾಂತದ ರೀತಿಯಲ್ಲಿ ಬೃಹತ್ ಪ್ರಮಾಣದ್ದಲ್ಲ ಅಥವಾ ಸೂಕ್ಷ್ಮ ಸಿದ್ದಾಂತದಂತೆ ಅತಿ ಸಣ್ಣ ಗುಂಪಿಗೆ ಸಂಬಂಧಿಸಿದ್ದಲ್ಲ. ಮಧ್ಯಮ ಹಂತದಲ್ಲಿ, ಅಂದರೆ, ಸಮಗ್ರ ಮತ್ತು ಸೂಕ್ಷ್ಮ ಮಟ್ಟಗಳ ನಡುವೆ ಕಂಡುಬರುತ್ತದೆ.
ಇವು ಮಧ್ಯಮ ಹಂತದ ಸಾಮಾಜಿಕ ಶಕ್ತಿಗಳ ಬಗೆಗಿನ ಸಿದ್ಧಾಂತಗಳಾಗಿರುವವು. ಉದಾಹರಣೆಗೆ, ಸಾಮಾಜಿಕ ಸ್ತರವಿನ್ಯಾಸದ ಘಟಕಗಳಾದ ಆದಾಯ, ವಯಸ್ಸು, ಲಿಂಗ, ಭೌಗೋಳಿಕವಾಗಿ ಸೀಮಿತವಾದ ಸಮುದಾಯ (ಕರ್ನಾಟಕದ ಸಿದ್ದಿಗಳು), ಜನಾಂಗ ಮುಂತಾದವುಗಳನ್ನು ಅಧ್ಯಯನ ಮಾಡುವರು.
ಜೆ ಹೆಚ್ ಟರ್ನರ್ ಅವರ ಪ್ರಕಾರ, ಈ ಹಂತದಲ್ಲಿ ಸಮಾಜವು ಸಮಗ್ರ ಮಟ್ಟದ ಕಾರಣೀಭೂತ ಅಂಶಗಳಿಂದ ಹಾಗು ಸೂಕ್ಷ್ಮ ಮಟ್ಟದ ಅಂತಃಕ್ರಿಯಗಳಿಂದ ರೂಪಿಸಲ್ಪಡುತ್ತದೆ.
ರಾಬರ್ಟ್ ಕಿಂಗ್ ಮರ್ಟನ್ ಅವರು ಅಪವರ್ತನೆಯ ಬಗ್ಗೆ ನೀಡಿರುವ ತಮ್ಮ ಚಿಂತನೆಯನ್ನು middle range theory ಎಂದು ಕರೆದಿರುವರು. ನೇರವಾಗಿ ಸಮಗ್ರ ಸಿದ್ಧಾಂತ ರಚನೆ ಅನುಪಯುಕ್ತ, ಬದಲಿಗೆಅನೇಕ ಮಧ್ಯಮ ಹಂತದ ಸಿದ್ದಾಂತಗಳನ್ನು ರೂಪಿಸುವುದರ ಮೂಲಕ ಅಂತಿಮವಾಗಿ ಸಮಗ್ರ ಸಿದ್ಧಾಂತದ ಕಡೆಗೆ ಚಲಿಸಬಹುದೆಂದು ಇವರು ವಾದಿಸುತ್ತಾರೆ.
ನಗರ ಮಟ್ಟದ ಅಧ್ಯಯನಗಳು, ಬುಡಕಟ್ಟುಗಳ ಅಧ್ಯಯನಗಳು ಮಧ್ಯಮ ಹಂತದ ಸಿದ್ಧಾಂತಗಳಿಗೆ ಉತ್ತಮ ಉದಾಹರಣೆಗಳು.
ವೈಜ್ಞಾನಿಕ ಸಿದ್ಧಾಂತವು ಸಾಮಾನ್ಯವಾಗಿ ಈ ಕೆಳಗಿನ ಲಕ್ಞಣಗಳನ್ನು ಹೊಂದಿರುತ್ತವೆ: (ಅ) ಸಿದ್ಧಾಂತದಲ್ಲಿ ಬಳಸುವ ಎಲ್ಲ ಪ್ರಮುಖ ಪದಗಳನ್ನು ಗುರುತಿಸಿ, ಅವುಗಳ...
Comments