top of page

Why Theory?

Soumya Kumar

ಸೈದ್ದಾಂತಿಕ ಚಿಂತನೆಯ ಅಗತ್ಯತೆ


ಎಲ್ಲ ವಿಜ್ಞಾನಿಗಳು ಸಂಶೋಧನೆಗೆ ಪ್ರಾಥಮಿಕ ಮಹತ್ತ್ವ ನೀಡುವರು. ಈ ಸಂಶೋಧನೆಗಳ ಅಂತಿಮ ಗುರಿ ಒಂದೇ ಆಗಿರುವುದು: ತಮ್ಮ ಅಧ್ಯಯನ ವಿಷಯದಲ್ಲಿನ ಜ್ಞಾನವನ್ನು ಹೆಚ್ಚಿಸುವುದು.

ವಿಜ್ಞಾನಿಗಳೆಲ್ಲರೂ -

ಜಗತ್ತಿನಲ್ಲಿ ನಡೆಯುತ್ತಿರುವುದೆಲ್ಲವೂ ಹೇಗೆ ನಡೆಯುತ್ತಿದೆ, ಮತ್ತು ಏಕೆ ನಡೆಯುತ್ತಿದೆ — ಎಂಬುದನ್ನು ತಿಳಿಯ ಬಯಸುತ್ತಾರೆ. ಪ್ರಪಂಚದಲ್ಲಿ ಏಕೆ ….? ಎಂಬುದನ್ನು ಅರಿಯಲು ಎರಡು ಕಾರಣಗಳಿವೆ:

೧. ತಿಳಿಯುವುದಕ್ಕೋಸ್ಕರ ತಿಳಿಯಲು

೨. ಯಾವುದಾದರು ಸಮಸ್ಯೆಗೆ ಉತ್ತರವನ್ನು ಕಂಡುಕೊಳ್ಳಲು.

ಸಂಶೋಧಕರು ಅನೇಕ ಬಗೆಯ ಪ್ರಶ್ನೆಗಳನ್ನು ಕೇಳಬಹುದು. ಅವುಗಳಿಗೆ ಉತ್ತರ ಪಡೆಯಲು ಪ್ರಯತ್ನಿಸಬಹುದು:

ಕೆಲವು ವಿದ್ಯಾರ್ಗಥಿಗಳೇಕೆ ಇತರರಿಗಿಂತ ಉತ್ತಮ ಅಂಕ/ಗ್ರೇಡ್ ಪಡೆಯುವರು? ಈ ಎರಡು ಗುಂಪುಗಳ ನಡುವೇಕೆ ಭಿನ್ನತೆಗಳಿವೆ? ಯಾವ ಬೋಧನಾ ವಿಧಾನಗಳು ಹೆಚ್ಚು ಸಮರ್ಥವಾಗಿ ಫಲ ನೀಡುವುದು? ಯಾವ ಬೋಧನಾ ವಿಧಾನಗಳು ವಿದ್ಯಾರ್ಥಿಗಳ ಪ್ರಶ್ನೆಗಳಿಗೆ ಉತ್ತರಿಸಲು ಸಮರ್ಪಕವಾಗಿವೆ? ಕೆಲವು ಕುಟುಂಬಗಳೇಕೆ ವಿದ್ಯಾಭ್ಯಾಸಕ್ಕೆ ಹೆಚ್ಚಿನ ಒತ್ತು ನೀಡುವವು? ಇತ್ಯಾದಿ.

ಈ ಬಗೆಯ ಪ್ರಶ್ನೆಗಳಿಗೆ ಉತ್ತರ ಕಂಡುಕೊಂಡು, ಬೌದ್ಧಿಕವಾಗಿ ಮತ್ತು ಪ್ರಪಂಚದ ದೈನಂದಿನ ಸವಾಲುಗಳನ್ನು ಎದುರಿಸಲು ಎರಡು ಬಗೆಯ, ತೀರಾ ವಿಭಿನ್ನವಾದ ಆದರೆ ಪರಸ್ಪರ ಸಂಬಂಧಿತವಾದ ಪ್ರಪಂಚಗಳಲ್ಲಿ ಸಂಶೋಧಕರು ಕಾರ್ಯನಿರ್ವಹಿಸುವರು: ಅಮೂರ್ತ (ಪರಿಕಲ್ಪನೆಗಳು/ಚಿಂತನೆ) ಮತ್ತು ವ್ಯಾವಹಾರಿಕ (ಅನುಭವಗಮ್ಯ ಪ್ರಪಂಚ). ಸಿದ್ಧಾಂತಗಳು ಈ ಎರಡು ವಿಭಿನ್ನ ಪ್ರಪಂಚಗಳನ್ನು ಜೋಡಿಸುವ ಕೊಂಡಿಯಾಗಿರುವುದು.

ಜೋಡಿಸುವುದರೊಟ್ಟಿಗೆ, ಸಂಶೋಧನೆಗಳ ಮೂಲಕ ತಿಳಿದು ಬಂದಿರುವ ಆಧಾರದಸಲ್ಲಿ ವಿವರಣೆಗಳನ್ನು, ಸಾರಾಂಶಗಳನ್ನು, ವಿಮರ್ಶೆಗಳನ್ನು ಮಾಡುವುದು; ಲಭ್ಯವಿರುವ ಮಾಹಿತಿ/ಜ್ಞಾನವನ್ನು ಒಟ್ಟುಗೂಡಿಸುವುದು. ಅಲ್ಲದೇ, ಜ್ಞಾನವನ್ನು ಹೆಚ್ಚಿಸಲು ಅವಶ್ಯವಾದ ಭವಿಷ್ಯದ ಸಂಶೋಧನೆಗಳಿಗೆ ಮಾರ್ಗದರ್ಶಕವಾಗುವುದು.

ಸಿದ್ಧಾಂತವು -

(ಅ) ನಾವು ಅವಲೋಕಿಸುವ ವಿದ್ಯಮಾನಗಳಿಗೆ ಹೆಸರು ನೀಡುವುದು. ಈ ಹೆಸರುಗಳೇ ಪರಿಕಲ್ಪನೆಗಳು. ಮತ್ತು ಪರಿಕಲ್ಪನೆಗಳ ನಡುವಿನ ಸಂಬಂಧಗಳನ್ನು ವಿವರಿಸುತ್ತದೆ
(ಆ) ಸಂಶೋಧನಾ ಸಮಸ್ಯೆಗಳನ್ನು ಗುರುತಿಸುವ ಸಾಧನವೇ ಸಿದ್ಧಾಂತ. ಅವುಗಳಿಗೆ ಉತ್ತರ/ಸಮಾಧಾನಗಳನ್ನು ಕಂಡುಕೊಳ್ಳಲು ಸಹಾಯಕ
(ಇ) ಸಂಶೋಧನೆಗೆ ಧನ ಸಹಾಯ ಪಡೆಯಲು ಸೈದ್ಧಾಂತಿಕ ವಿವರಣೆ ಅವಶ್ಯಕ — ಸಿದ್ಧಾಂತ ಮತ್ತು ಸಂಶೋಧನೆಗಳ ನಡುವಿನ ಸಂಬಂಧ ವಿವರಿಸಲು ಸಿದ್ಧಾಂತ ಅವಶ್ಯಕ
(ಈ) ಯಾವುದೇ ಅಧ್ಯಯನ ಕ್ಷೇತ್ತ/ಜ್ಞಾನ ಶಾಖೆಯ ಬೆಳವಣಿಗೆಯನ್ನು ಗುರುತಿಸುವ ಪ್ರಾಥಮಿಕ ಮಾನದಂಡವೇ ಸಿದ್ದಾಂತ. ಸೈದ್ಧಾಂತಿಕ ಚಿಂತನೆ ಜ್ಞಾನದ ವಿಸ್ತಾರತೆಯನ್ನು ಗುರುತಿಸಲು ಅವಶ್ಯಕ. ವೃತ್ತಿಯ ಬೆಳವಣಿಗೆಗೆ ಸಿದ್ಧಾಂತಗಳ ಬೆಳವಣಿಗೆ ಆಗಬೇಕು
(ಉ) ನಾವು ಯಾವುದನ್ನು ಅರಿತಿಲ್ಲವೋ, ಅದನ್ನು ಗುರುತಿಸಲು ಸಿದ್ಧಾಂತಗಳು ಸಹಾಯಕ. ಹಾಗಾಗಿ, ಸಂಶೋಧನೆಯ ಏಕೈಕ ಮಾರ್ಗದರ್ಶಕ — ಸಿದ್ಧಾಂತ. ಬೇರೆ-ಬೇರೆ ಕಾಲಘಟ್ಟಗಳಲ್ಲಿ ಹಾಗು ಬೇರೆ-ಬೇರೆ ಪ್ರದೇಶಗಳಲ್ಲಿನ ಸಮಸ್ಯೆಗಳಿಗೆ ಸಿದ್ಧಾಂತಗಳು ಪರಿಹಾರ ನೀಡುವ ಸಾಮರ್ಥ್ಯ ಹೊಂದಿರುತ್ತದೆ.

0 views0 comments

Recent Posts

See All

Features of Theory: ಸಿದ್ಧಾಂತದ ಲಕ್ಷಣಗಳು

ವೈಜ್ಞಾನಿಕ ಸಿದ್ಧಾಂತವು ಸಾಮಾನ್ಯವಾಗಿ ಈ ಕೆಳಗಿನ ಲಕ್ಞಣಗಳನ್ನು ಹೊಂದಿರುತ್ತವೆ: (ಅ) ಸಿದ್ಧಾಂತದಲ್ಲಿ ಬಳಸುವ ಎಲ್ಲ ಪ್ರಮುಖ ಪದಗಳನ್ನು ಗುರುತಿಸಿ, ಅವುಗಳ...

Comments


©2022 by LearningSociology. Proudly created with Wix.com

bottom of page